ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ

ಇಂಧನ ಇಲಾಖೆ

ವಿದ್ಯುತ್‌ ಸುರಕ್ಷತೆ

 Do’s

 1. Pull the plug itself, not the cord attached to it.
 2. Disconnect any appliance that sparks and have it repaired immediately.
 3. Always disconnect appliances before cleaning them.
 4. Turn off appliances when you leave home.
 5. Keep electrical cords away from hot appliances.
 6. Keep appliances clean and free of dust, lint and grease.
 7. Use moisture resistant cords when outside.
 8. Wear rubber soled shoes when operating power tools.
 9. Follow manufacturers' instructions when operating electrical devices. All electrical devices should carry an Underwriters Laboratory approval tag.
 10. Make sure outdoor electrical outlets are covered with weatherproof covers.
 11. Use extension cords only for temporary applications.
 12. Use heavy duty cords when using power tools.
 13. Keep work areas clean and dry. Sparks can ignite wood scraps, sawdust and solvents.
 14. Make sure your power tools are grounded or certified double insulated.
 15. When utilizing adapters, make sure to screw in the wire for grounding.
 16. Certain outlets for outdoor appliances or tools should have a ground fault interrupter (G.F.I). This type of circuit breaker, installed in an outlet, protects the user from shock.

Don'ts

 1. Never turn on an appliance when standing or sitting in water. Shocks can be fatal.
 2. Never overload a circuit by plugging in too many appliances.
 3. Plug three-way grounded plugs into appropriate outlets. Never tamper with the third prong.
 4. Never install cords under rugs where they will become worn by foot traffic.

ವಿದ್ಯುತ್ ಅಪಘಾತಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ( DOs & Don’ts)

 1. ವಿದ್ಯುತ್ ಕಾಮಗಾರಿಗಳನ್ನು ಅಧಿಕೃತ ವ್ಯಕ್ತಿಗಳು/ಇಲಾಖಾ ನೌಕರರು/ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರ ಮುಖಾಂತರ ಕೈಗೊಳ್ಳುವುದು.
 2. ವಿದ್ಯುತ್ ಗುತ್ತಿಗೆದಾರರು ಯಾವುದೇ ವಿದ್ಯುತ್ ಕಾಮಗಾರಿಗಳನ್ನು ಕೈಗೊಳ್ಳುವಾಗ ಅಧಿಕೃತ ಮತ್ತು ನುರಿತ ವಿದ್ಯುತ್ ಪರ್ಯವೇಕ್ಷಕರನ್ನು ನೇಮಿಸಿ, ಅಧಿಕೃತ ಮತ್ತು ವಿದ್ಯುತ್ ಪರ್ಯವೇಕ್ಷಕರ ಮೇಲ್ವಿಚಾರಣೆಯಲ್ಲಿ ಮಾನ್ಯತೆ ಪಡೆದ ವಿದ್ಯುತ್ ತಂತೀಗಾರರಿಂದಲೇ ಕಾಮಗಾರಿ ಮಾಡಿಸುವುದು.
 3. ಇಲಾಖಾ ನೌಕರರು/ಕಾಮಗಾರಿ ಕೈಗೊಳ್ಳುವ ಕೆಲಸಗಾರರು, ವಿದ್ಯುತ್ ಮಾರ್ಗಗಳಲ್ಲಿ, ವಿದ್ಯುತ್ ಪರಿವರ್ತಕ ಕೇಂದ್ರಗಳಲ್ಲಿ, ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಮತ್ತು ಇನ್ನಿತರ ಸ್ಥಳಗಳಲ್ಲಿ ಕೆಲಸ ಮಾಡುವ ಮೊದಲು, ಕಾಮಗಾರಿ ಕೈಗೊಳ್ಳುವ ಸ್ಥಳದಲ್ಲಿನ ಎಲ್ಲಾ ಸಂಬಂಧಪಟ್ಟ ವಿದ್ಯುತ್ ಮಾರ್ಗಗಳ ಖಚಿತ ಮಾಹಿತಿ ಪಡೆದು, ಎಲ್ಲಾ ಮಾರ್ಗಗಳ ಮಾರ್ಗ ಮುಕ್ತತೆಯನ್ನು ಪಡೆದು ವಿದ್ಯುತ್ ಮಾರ್ಗಗಳಿಗೆ ಎರಡು ಕಡೆ ತಾತ್ಕಾಲಿಕ ಭೂಸಂಪರ್ಕ ಕಲ್ಪಿಸಿಕೊಂಡು, ಸುರಕ್ಷತಾ ಉಪಕರಣಗಳಾದ ರಬ್ಬರ್ ಕೈಚೀಲಗಳು, ರಬ್ಬರ್ ಷೂಗಳು, ಸೇಪ್ಟಿ ಬೆಲ್ಟ್, ಲೈನ್ ಟೆಸ್ಟರ್, ಹೆಲ್ಮೆಟ್, ಇತ್ಯಾದಿಗಳನ್ನು ಕಡ್ಡಾಯವಾಗಿ ಉಪಯೋಗಿಸಿಕೊಂಡು ಕೆಲಸ ನಿರ್ವಹಿಸುವುದು.
 4. ಸುರಕ್ಷತಾ ಉಪಕರಣಗಳಾದ ರಬ್ಬರ್ ಕೈಚೀಲಗಳು, ರಬ್ಬರ್ ಷೂಗಳು, ಸೇಪ್ಟಿ ಬೆಲ್ಟ್, ಲೈನ್ ಟೆಸ್ಟರ್, ಹೆಲ್ಮೆಟ್, ಏಣಿ, ಭೂಸಂಪರ್ಕಗೊಳಿಸುವ ಸಲುವಾಗಿ ಸಾಮಾಗ್ರಿಗಳು ಇತ್ಯಾಧಿಗಳನ್ನು ತಪ್ಪದೇ ಎಲ್ಲಾ ಸಂಬಂಧಿಸಿದ ಕಚೇರಿಗಳಲ್ಲಿ ಇರುವಂತೆ ಏರ್ಪಾಟು ಮಾಡುವುದು.
 5. ವಿದ್ಯುತ್‌ ಉಪ ಕೇಂದ್ರಗಳಲ್ಲಿನ ರಿಲೇ ಹಾಗೂ ಸರ್ಕ್ಯೂಟ್ ಬ್ರೇಕರಗಳನ್ನು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ಏರ್ಪಾಟುಮಾಡುವುದು ಹಾಗೂ ಮಾರ್ಗ ಮುಕ್ತತೆ ನೀಡಿದ ಮೇಲೆ ಸರಿಯಾಗಿ ಬ್ರೇಕರ್ ಮತ್ತು ಜಿ.ಓ.ಎಸ್.ಗಳನ್ನು ಆಫ್ ಮಾಡುವುದು ಹಾಗೂ ಲೈನುಗಳನ್ನು ಸರಿಯಾಗಿ ಭೂಸಂಪರ್ಕಗೊಳಿಸುವುದು.
 6. ಮಾರ್ಗ ಮುಕ್ತತೆಯನ್ನು ವಾಪಾಸ್ಸು ಪಡೆದು ಮಾರ್ಗಗಳನ್ನು ಚಾಲನೆಗೊಳಿಸುವ ಮುನ್ನ ಕಾಮಗಾರಿ ಮಾಡುತ್ತಿದ್ದ ಸ್ಥಳದಲ್ಲಿ ಎಲ್ಲಾ ಕೆಲಸ ಮುಗಿದು, ಕೆಲಸಗಾರರು ಕಂಬಗಳಿಂದ / ಮಾರ್ಗಗಳಿಂದ ಕೆಳಗೆ ಇಳಿದಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದು.
 7. ಎಲ್ಲಾ ನಶಿಸಿರುವ / ಹಳೆಯದಾದ ವಿದ್ಯುತ್ ಕಂಬಗಳು, ಲೈನುಗಳು ಇನ್ಸುಲೇಟರ್ ಗಳು, ಗೈ- ವೈರುಗಳನ್ನು ಸೂಕ್ತ ಸಮಯದಲ್ಲಿ ಬದಲಿಸುವುದು ಮತ್ತು ವಾಲಿರುವ ಕಂಬಗಳನ್ನು ಸರಿ ಮಾಡುವುದು.
 8. ಒಂದೇ ಕಂಬದಲ್ಲಿ ಹೆಚ್.ಟಿ./ಎಲ್.ಟಿ. ತಂತಿಗಳು ಹಾದು ಹೋದಾಗ ಮತ್ತು ಬೇರೆ, ಬೇರೆ ಮಾರ್ಗಗಳು ಕ್ರಾಸ್ ಆದಾಗ ಅವುಗಳ ನಡುವೆ ಗಾರ್ಡಿಂಗ್ ಏರ್ಪಡಿಸಿ, ಗಾರ್ಡಿಂಗ್ ವೈರ್ ಗೆ ಸಮರ್ಪಕ ಭೂಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವುದು ಮತ್ತು ಸುಸ್ಥಿತಿಯಲ್ಲಿರುವಂತೆ ನಿರ್ವಹಣೆ ಮಾಡುವುದು.
 9. ಎಲ್ಲಾ ಪರಿವರ್ತಕ ಕೇಂದ್ರಗಳ ಭೂಸಂಪರ್ಕ ತಂತಿಗಳು ಮತ್ತು ಪೈಪುಗಳನ್ನು ನಿಯಮಾನುಸಾರ ಕಾಪಾಡುವುದು.
 10. ಕಂಬಗಳಿಗೆ ಅಳವಡಿಸಿರುವ ಗೈ-ವೈರುಗಳ ಬ್ರೇಕ್ ಇನ್ಸುಲೇಟರ್ ಗಳನ್ನು ಸೂಕ್ತ ಅಂತರದಲ್ಲಿ                               (ಭೂಮಿಯಿಂದ 3 ಮೀಟರ್ ಎತ್ತರದಲ್ಲಿ)  ಅಳವಡಿಸುವುದು/ಒಡೆದು ಹೋದ ಬ್ರೇಕ್ ಇನ್ಸುಲೇಟರ್ ಗಳನ್ನು ಮರು ಜೋಡಿಸುವುದು.
 11. ವಿದ್ಯುತ್ ಸ್ಥಾವರಗಳ ಸೇವಾ ಮಾರ್ಗಗಳಲ್ಲಿ ಒಳ್ಳೆಯ ಗುಣಮಟ್ಟದ ಬ್ರೇಕ್ ಇನ್ಸುಲೇಟರ್ ಗಳನ್ನು ಉಪಯೋಗಿಸಿ, ಮೆಸೆಂಜರ್ ತಂತಿ ಹಾಗೂ ಕಂಬ/ಹಾಫ್ ಪೋಲ್ ಗಳಿಗೆ ಬಿಗಿಯುವ ಜಿ.ಐ. ತಂತಿಗಳ ನಡುವೆ ಅಂತರ ಕಾಪಾಡುವುದು ಮತ್ತು ಹಾಫ್ ಪೋಲ್ ಗಳ ಭೂಸಂಪರ್ಕ ತಂತಿಗಳನ್ನು ಕಾಂಡ್ಯೂಟ್್ನಲ್ಲಿ ಅಳವಡಿಸಿ ಮತ್ತು ನಿಯಮಾನುಸಾರ ಭೂಸಂಪರ್ಕಗೊಳಿಸುವುದು.
 12. ವಿದ್ಯುತ್ ತಂತಿಗಳ ಕೆಳಗೆ ಎತ್ತರವಾಗಿ ಬೆಳೆಯುವ ಬೆಳಗಳಾದ ಕಬ್ಬು ಇತ್ಯಾದಿಗಳನ್ನು ಬೆಳೆಯದೇ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಮನವರಿಕೆ ಮಾಡಿಸುವುದು
 13. ವಿದ್ಯುತ್ ತಂತಿಗಲ ಅಕ್ಕ ಪಕ್ಕ ಬೆಳೆದಿರುವ ಮರ ಗಿಡಗಳ ಕೊಂಬೆಗಳನ್ನು ಕಾಲ ಕಾಲಕ್ಕೆ ಕತ್ತರಿಸುವುದು.
 14. ಅನಧೀಕೃತವಾಗಿ, ಅವ್ಯೆಜ್ಞಾನಿಕ ರೀತಿಯಲ್ಲಿ ವಿದ್ಯುತ್ ಅನ್ನು ಉಪಯೋಗಿಸುವುದರಿಂದ ಹಾಗೂ ತಂತಿ ಬೇಲಿಗೆ ವಿದ್ಯುತ್ ಹಾಯಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿ ಅದನ್ನು ತಡಗಟ್ಟುವುದು.
 15. ಸಾರ್ವಜನಿಕರಲ್ಲಿ ವಿದ್ಯುತ್ ಬಳಸುವ ಕುರಿತು ಜಾಗೃತಿ ಮೂಡಿಸುವುದು – ವಿದ್ಯುತ್ ಕಂಬಗಳಿಗೆ ದನ ಕರುಗಳನ್ನು ಕಟ್ಟದಿರುವುದು, ವಿದ್ಯುತ್ ಕಂಬಗಳಿಗೆ ತಂತಿಗಳನ್ನು ಕಟ್ಟು ಅದರ ಮೇಲ್ ಬಟ್ಟೆ ಒಣಗಿ ಹಾಕದಿರುವುದು, ಲೈನುಗಳ ಅತಿ ಸಮೀಪದಲ್ಲಿ ಕಟ್ಟಡಗಳನ್ನು ಕಟ್ಟದಿರುವುದು, ವಾಹಕಗಳು ತುಂಡಾಗಿ ಬಿದ್ದಿದಲ್ಲಿ ಸಮೀಪಕ ಎಸ್ಕಾಂ ಕಚೇರಿಗಳಿಗೆ ತಿಳಿಸುವುದು, ಯಾವಾಗಲೂ 3 ಪಿನ್ ಸಾಕೆಟ್ ಹಾಗೂ ಪ್ಲಗ್್ಗಳನ್ನೇ ಉಪಯೋಗಿಸಲು ಮತ್ತು 3ನೇ ಪಾಯಿಂಟ್್ ಅರ್ಥ್ ಆಗಿರುವುದು, ಎಲ್ಲಾ ಸ್ಥಾವರಗಳಿಗೂ ಸರಿಯಾಗಿ ಭೂಸಂಪರ್ಕ ಏರ್ಪಡಿಸುವುದು, ಸೂಕ್ತ ಸಾಮಾರ್ಥ್ಯದ ಎಂ.ಸಿ.ಬಿ./ ಇ.ಎಲ್.ಸಿ.ಬಿ. ಗಳನ್ನು ಉಪಯೋಗಿಸುವುದು ಮತ್ತು ನೀರು ಕಾಯಿಸಲು ಓಪನ್ ಕಾಯಿಲ್ ಅನ್ನು ಉಪಯೋಗಿಸದಿರುವುದು.
 16. ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ನಿರ್ಮಿಸುವ ತಾತ್ಕಾಲಿಕ ವಿದ್ಯುತ್ ವ್ಯವಸ್ಥೆಗಳಲ್ಲಿ ಇನ್ಸುಲೇಟೆಡ್ ವಾಹಕಗಳು ಬಳಸುವುದು ಹಾಗೂ ವಾಹಕಗಳ ಇನ್ಸುಲೇಷನ್್ ಹಾನಿಯಾಗದಂತೆ ಕಾಪಾಡಿಕೊಳ್ಳುವುದು. ಎಲ್ಲಾ ವೈರಿಂಗ್ ಅನ್ನು ಸಾರ್ವಜನಿರು ಓಡಾಡುವ ಸ್ಥಳದಲ್ಲಿ ಕೆಳಗೆ ಎಳೆದುಕೊಳ್ಳದೇ ನಿಗಧಿತ  ಅಂತರದಲ್ಲಿ ಅಳವಡಿಸುವುದು.  ನ್ಯೂಟ್ರಲ್ ಗಾಗಿ ಜಿ.ಐ. ತಂತಿಯನ್ನು ಬಳಸದೇ ಇನ್ಸುಲೇಟೆಡ್ ವೈರ್ ಅನ್ನೇ ಬಳಸುವುದು.
 17. ವಿದ್ಯುತ್ ಮಾರ್ಗಗಳ ಕೆಳಗೆ ಭಾರಿ ವಾಹನಗಳು/ಎತ್ತರದ ವಾಹನಗಳನ್ನುನಿಲ್ಲಿಸದೇ ಇರುವುದು.
 18. ಸಾರ್ವಜನಿಕ ಮೆರವಣಿಗೆ ಸಮಯದಲ್ಲಿ ವಿದ್ಯುತ್ ಮಾರ್ಗಗಳ ಹತ್ತಿರುವ ಎತ್ತರದ ಮಂಟಪ/ಮೂರ್ತಿಗಳನ್ನು ತೆಗೆದುಕೊಂಡು ಹೋಗುವಾಗ ವಿದ್ಯುತ್ ವಾಹಕಗಳಿಂದ ಸುರಕ್ಷಿತ ಕಾಪಾಡುವುದು.
 19. ವಿದ್ಯುತ್ ಉಪಕರಣಗಳ ಬಳಿ ಬೆಂಕಿ ಹೊತ್ತಿಕೊಳ್ಳಬಹುದಾದಂತಹ ವಸ್ತುಗಳನ್ನು ಇರಿಸದಂತೆ ಎಚ್ಚರ ವಹಿಸುವುದು.
 20. ವಿದ್ಯುತ್ ಸುರಕ್ಷತೆಯ ಬಗ್ಗೆ ಸೂಚನಾ ಫಲಕಗಳು ಹಾಗೂ ಚಿಹ್ನೆಗಳನ್ನು ಬಳಸಿ ಜಾಗೃತಿ ಮೂಡಿಸುವುದು.
 21. ವಿದ್ಯುತ್ ಸುರಕ್ಷತೆಯುಳ್ಳ ಜಾಗಗಳಲ್ಲಿ ತೇವಾಂಶವಿಲ್ಲದಂತೆ ಜಾಗ್ರತೆ ವಹಿಸುವುದು

 

×
ABOUT DULT ORGANISATIONAL STRUCTURE PROJECTS