ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ

ಇಂಧನ ಇಲಾಖೆ

ಬಳಕೆಯಾಗದ ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ನಲ್ಲಿನ ಅಪಘಾತಗಳ ವರದಿ.

ಬಳಕೆಯಾಗದ ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್:-

ಯಾವುದೇ ಕಟ್ಟಡದಲ್ಲಿ ಯಾವುದೇ ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ಬಳಸಲು ಸಾದ್ಯವಿಲ್ಲದ ಸ್ಥಿತಿಯಲ್ಲಿದೆ ಎಂಬುದಾಗಿ ತಿಳಿದು ಬಂದಾಗ, ಅಂತ ಲಿಫ್ಟ್ ಮಾಲೀಕರು ಪ್ರಾಧಿಕೃತ ಅಧಿಕಾರಿಯಿಂದ ಡಿಸ್ಮ್ಯಾಂಟ್ಲಿಂಗ್ ಅನುಮೋದನೆ ನಂತರ ಅವನ್ನು ತೆಗೆದು ಹಾಕತಕ್ಕದ್ದು ಅಥವಾ ಪ್ರಾಧಿಕೃತ ಅಧಿಕಾರಿಗಳಿಗೆ ತಿಳಿಸಿ ಲಿಫ್ಟ್ ನ ಎಲ್ಲಾ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸುರಕ್ಷಿತ ಮೆಕ್ಸಾನಿಕಲ್ ಸ್ಥಿತಿಯಲ್ಲಿ ಇಡತಕ್ಕದ್ದು ಹಾಗೂ ಲಿಫ್ಟ್ ಬಳಿಗೆ ಯಾವುದೇ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸುವ ಸಲುವಾಗಿ ಎಲ್ಲಾ ಗೇಟ್ ಗಳು ಮತ್ತು ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚತಕ್ಕದ್ದು.

ಲಿಫ್ಟ್ ಅಪಘಾತಗಳ ವರದಿ:–

ಯಾವುದೇ ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ನ ಕಾರ್ಯಾಚರಣೆಯಲ್ಲಿ ಯಾವೊಬ್ಬ ವ್ಯಕ್ತಿಗೆ ಗಾಯವುಂಟಾಗುವ, ಯಾವುದೇ ಅಪಘಾತ ಉಂಟಾಗಿದ್ದರೆ ಅಥವಾ ಯಾವುದೇ ಅಪಘಾತವುಂಟಾಗುವ ಸಾದ್ಯತೆ ಇದ್ದರೆ, ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ಕೆಲಸ ಮಾಡುತ್ತಿರುವ ಕಟ್ಟಡದ ಮಾಲೀಕ ಅಥವಾ ಅಂಥ ಮಾಲೀಕನು ಏಜೆಂಟನನ್ನು ನೇಮಕ ಮಾಡಿದ್ದರೆ ಏಜೆಂಟನು, ಅಂಥ ಅಪಘಾತ ಸಂಭವಿಸಿದ ನಂತರ, ಆದಷ್ಟು ಬೇಗನೆ, ಅಪಘಾತದ ಬಗ್ಗೆ ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ಗಳ ಪ್ರಾಧಿಕೃತ ಅಧಿಕಾರಿಗೆ ಮತ್ತು ಪೋಲೀಸ್ ಕಮಿಷನರಿಗೆ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟರ್ ಗೆ ನಿಯಮಿಸಬಹುದಾದ ನಮೂನೆಯಲ್ಲಿ ಪೂರ್ಣ ವಿವರಗಳ ಸಹಿತ ಸೂಚನೆಯನ್ನು ನೀಡತಕ್ಕದ್ದು, ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ಸ್ಥಾಪನೆಗೆ ಸಂಬಂಧಿಸಿದಂತೆ ಯಾವ ರೀತಿಯಲ್ಲೂ ಮದ್ಯ ಪ್ರವೇಶಿಸ ತಕ್ಕದ್ದಲ್ಲ ಮತ್ತು ಈ ಸಂಬಂಧದಲ್ಲಿ ಸರ್ಕಾರವು ಪ್ರಾಧಿಕೃತಗೊಳಿಸಿದ ಅಧಿಕಾರಿಯ ಲಿಖಿತ ಅನುಮತಿಯ ಹೊರತಾಗಿ ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ಕಾರ್ಯಾರಂಭ ಮಾಡತಕ್ಕದ್ದಲ್ಲ.

ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್ ಅನುಸ್ಥಾಪನೆಯಿರುವ ಕಟ್ಟಡದ ಮಾಲೀಕರು ಅಥವ ಮಾಲೀಕರು ಅಲ್ಲಿ ವಾಸವಿಲ್ಲದಿದ್ದಲ್ಲಿ ಅದೇ ಪಟ್ಟಣದ ಅಥವಾ ಹಳ್ಳಿಯ ವ್ಯಕ್ತಿಯನ್ನು ಏಜೆಂಟರನ್ನಾಗಿ ನೇಮಕ ಮಾಡಿಕೊಳ್ಳ ತಕ್ಕದ್ದು, ಇವರುಗಳು ಅಪಘಾತಗಳ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡತಕ್ಕದ್ದು ಹಾಗು ಇವರುಗಳ ಹೆಸರುಗಳನ್ನು ಅಧಿಕಾರಿಗಳಿಗೆ ತಿಳಿಸತಕ್ಕದ್ದು.

×
ABOUT DULT ORGANISATIONAL STRUCTURE PROJECTS