ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ

ಇಂಧನ ಇಲಾಖೆ

ವಿದ್ಯುತ್‌ ತರಿಗೆ

ವಿದ್ಯುತ್ ತೆರಿಗೆ

ಕರ್ನಾಟಕ ವಿದ್ಯುಚ್ಚಕ್ತಿ (ಬಳಕೆ ಅಥವಾ ಮಾರಾಟ ಮೇಲಿನ ತೆರಿಗೆ) ನಿಯಮ 2014ರ ಅನ್ವಯ ಲೈಸನ್ಸ್/ನಾನ್ ಲೈಸನ್ಸ್ ದಾರರು ಸಲ್ಲಿಸಬೇಕಾದ ಮಾಹಿತಿಯನ್ನು ಆನ್ ಲೈನ್ “ಸೇವಾಸಿಂಧೂ “ ವಿದ್ಯುನ್ಮಾನ ಜಾಲದ ಮೂಲಕ ಸಲ್ಲಿಸುವ ವ್ಯವಸ್ಥೆಯನ್ನು ದಿ:1-5-2019 ರಿಂದ ಜಾರಿಗೊಳಿಸಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ವೀಕ್ಷಿಸಿ.

   I. ಕರ್ನಾಟಕ ವಿದ್ಯುಚ್ಚಕ್ತಿ (ಬಳಕೆ ಅಥವ ಮಾರಾಟ ಮೇಲಿನ ತೆರಿಗೆ) ಕಾಯ್ದೆ 1959ರಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಬಳಕೆ/ಮಾರಾಟ ಮೇಲೆ ವಿದ್ಯುತ್ ತೆರಿಗೆಯನ್ನು ವಿಧಿಸಿ ವಸೂಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್ ಸರಬರಾಜು ಸಂಸ್ಥೆಗಳು ಗ್ರಾಹಕರಿಗೆ ಸರಬರಾಜು ಮಾಡಿದ ವಿದ್ಯುತ್ ಗೆ ಬಳಕೆ ಮೇಲಿನ ತೆರಿಗೆಯನ್ನು ಗ್ರಾಹಕರಿಂದ ವಸೂಲಿ ಮಾಡಿ ಸರ್ಕಾರಕ್ಕೆ ಸಂದಾಯ ಮಾಡತಕ್ಕದ್ದು, ವಿದ್ಯುತ್ ಪರಿವೀಕ್ಷಣಾಲಯ ದಿಂದ ಸ್ವ ವಿದ್ಯುತ್ ಉತ್ಪಾದನೆ ವಿದ್ಯುತ್‌ ತೆರಿಗೆಯನ್ನು ನಿಯಮನುಸಾರ ವಿಧಿಸಿ ವಸೂಲಿ ಮಾಡಲಾಗುತ್ತಿದೆ. ಗ್ರಾಹಕರಿಂದ ವಸೂಲಿ ಮಾಡಲಾದ ತೆರಿಗೆಯನ್ನು ವಿದ್ಯುತ್ ಪರಿವೀಕ್ಷಣಾ ಇಲಾಖೆಯಿಂದ ಕಂದಾಯ ಸ್ವೀಕೃತಿಯಡಿಯಲ್ಲಿ ರಾಜ್ಯ ಹುಜೂರು ಖಜಾನೆ/ಜಿಲ್ಲಾ ಖಜಾನೆಗೆ ತೆರಿಗೆ ಮೊತ್ತವನ್ನು ಭರಿಸಲಾಗುತ್ತದೆ.

   II. ಕರ್ನಾಟಕ ವಿದ್ಯುಚ್ಛಕ್ತಿ ( ಅಥವ ಮಾರಾಟ ಮೇಲಿನ ತೆರಿಗೆ) ಕಾಯ್ದೆಯಡಿಯಲ್ಲಿ ಈ ಕೆಳಕಂಡ ನಿಯಮಗಳ ವರ್ಗೀಕರಿಸಲಾಗಿದೆ.

1) ವಿದ್ಯುತ್ ಮಾರಾಟದ ಮೇಲೆ ವಿದ್ಯುತ್ ತೆರಿಗೆಯನ್ನು ವಿಧಿಸಿ ವಸೂಲಿ ಮಾಡುವುದು.

2)ಅಕ್ಸಲರಿ ಬಳಕೆದಾರ ವರ್ಗೀಕರಣ.

3)ಸ್ವ ವಿದ್ಯುತ್ ಉತ್ಪಾದನೆ & ಸ್ವಂತ ಬಳಕೆಗೆ ವಿದ್ಯುತ್ ತೆರಿಗೆ ವಿಧಿಸುವುದು.

4)ನಾನ್-ಲೈಸನ್ಸಿದಾರರಿಂದ ಗ್ರಿಡ್ ಮುಖೇನ 3ನೇ ವ್ಯಕ್ತಿ (ಇತರರಿಗೆ) ಮಾರಾಟ ಮಾಡಿದ ವಿದ್ಯುತ್ ಪ್ರಮಾಣಕ್ಕೆ ತೆರಿಗೆ ವಿಧಿಸುವುದು.

5)ವಿದ್ಯುತ್ ಪರಿವೀಕ್ಷಣ ಅಧಿಕಾರಿ (ಮುಖ್ಯ ವಿದ್ಯುತ್ ಪರಿವೀಕ್ಷಕರು) ವಿದ್ಯುತ್ ತೆರಿಗೆ ಒತ್ತಾಯ/ಪಾವತಿ ವಿಷಯಗಳಿಗೆ ಸಂಬಂಧಪಟ್ಟಂತೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

   III. ಕರ್ನಾಟಕ ಸರ್ಕಾರವು ಕರ್ನಾಟಕ ವಿದ್ಯುಚ್ಛಕ್ತಿ(ಬಳಕೆ ಮೇಲಿನ ತೆರಿಗೆ) ನಿಯಮ 1959 ಕ್ಕೆ ತಿದ್ದುಪಡಿಯನ್ನು ಹೊರಡಿಸಿ (ಕರ್ನಾಟಕ ಆಕ್ಟ್ ನ.31/2013) ಅಧೀನ ಹೊರಡಿಸಿ, ದಿನಾಂಕ 11.03.2013ರಂದು ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿದೆ (ಕರ್ನಾಟಕ ವಿಶೇಷ ಗೆಜೆಟ್ ಪಾರ್ಟ್-II ಎ ನಂ.562 11.03.2013 ದಿನಾಂಕದ) ಸದರಿ ಕಾಯ್ದೆಯ ಸೆಕ್ಷನ್ 10ರಡಿಯಲ್ಲಿ ಕ.ವಿ (ಬ/ಮಾ ಮೇಲಿನ ತೆರಿಗೆ ನಿಯಮ 2014ನ್ನು ಸರ್ಕಾರಿ ಆದೇಶ ಸಂಖ್ಯೆ ಇಎನ್ 144, ಇಬಿಎಸ್ 2013 ಬೆಂಗಳೂರು ದಿನಾಂಕ 19-08-2014 ರನ್ವಯ ಜಾರಿಗೆ ಬಂದಿದ್ದು, ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ 11.03.2015ರಲ್ಲಿ ಪ್ರಕಟಿಸಲಾಗಿದೆ.

 ಮುಂದುವರೆದು ಕರ್ನಾಟಕ ಸರ್ಕಾರವು, ಕರ್ನಾಟಕ ವಿದ್ಯುಚ್ಛಕ್ತಿ (ಬಳಕೆ ಅಥವಾ ಮಾರಾಟ ಮೇಲಿನ ತೆರಿಗೆ) ಕಾಯ್ದೆ-1959 ನ್ನು ತಿದ್ದುಪಡಿಗೊಳಿಸಿ ಕರ್ನಾಟಕ ಕಾಯ್ದೆ 24/2018 ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ (ಬಳಕೆ ಅಥವಾ ಮಾರಾಟ ಮೇಲಿನ ತೆರಿಗೆ) (ತಿದ್ದುಪಡಿ) ಕಾಯ್ದೆ-2018 ನ್ನು ಸರ್ಕಾರದ ಆದೇಶ ದಿನಾಂಕ:19/7/2018 ಮುಖೇನ ಜಾರಿಗೆ ತಂದಿರುತ್ತದೆ

ವಿದ್ಯುತ್ ತೆರಿಗೆ ದರ.
 1. ವಿದ್ಯುತ್ ಸರಬರಾಜು ಸಂಸ್ಥೆ ಮುಖೇನ ಮಾರಾಟ (3rd Party Sale) ಮೇಲೆ ಶೇ. 9 ರ ಅಡ್ವೋಲರಮ್ ತೆರಿಗೆ ವಿಧಿಸಿ, ವಸೂಲಿ ಮಾಡುವುದು .
 2. ಸ್ವ ವಿದ್ಯುತ್ ಉತ್ಪಾದನೆ ಮತ್ತು ಸ್ವಂತ ಬಳಕೆ ಮೇಲಿನ ವಿದ್ಯುತ್ ತೆರಿಗೆ 500 ಕೆವಿಎ ಸ್ಥಾಪಿತ ಸಾಮರ್ಥ್ಯ ಮತ್ತು ಮೇಲ್ಪಟ್ಟು, ಯುನಿಟ್ ಬಂದಕ್ಕೆ 20 ಪೈಸೆಯಂತೆ ವಿದ್ಯುತ್ ತೆರಿಗೆ ಪಾವತಿಸಲು ಸರ್ಕಾರದ ಅಧಿಸೂಚನೆಯನ್ನು, ದಿ: 19.07.2018 ಜಾರಿಗೊಳಿಸಲಾಯಿತು.
 3. ಅಕ್ಸಲರಿ ಬಳಕೆ ಮೇಲಿನ ತೆರಿಗೆ ಯುನಿಟ್ ಒಂದಕ್ಕೆ 5 ಪೈಸೆಯಂತೆ ವಿಧಿಸಿ, ದಿ:19.03.2015 ರಿಂದ  ಜಾರಿಗೊಳಿಸಲಾಯಿತು.

 * ಅಡ್ವಲೋರಮ್‌ ತೆರಿಗೆ- ವೀಕ್ಷಿಸಿ.

 * ಸ್ವವಿದ್ಯುತ್ ಉತ್ಪಾದನೆ ಮತ್ತು ಬಳಕೆ ಮೇಲಿನ ತೆರಿಗೆ- ವೀಕ್ಷಿಸಿ.

 * ಆಕ್ಸಲರಿ ತೆರಿಗೆ- ವೀಕ್ಷಿಸಿ.

   IV. ಕರ್ನಾಟಕ ವಿದ್ಯುಚ್ಛಕ್ತಿ(ಬಳಕೆ ಮೇಲಿನ ತೆರಿಗೆ) ಕಾಯ್ದೆ 1959 ನಿಯಮ 2014ರ ಮುಖ್ಯಾಂಶಗಳು.

 1. ಸೆಕ್ಷನ್ 3: ಸದರಿ ಕಾಯ್ದೆಯಡಿಯಲ್ಲಿ ಕರ್ನಾಟಕ ಸರ್ಕಾರವು ವಿದ್ಯುತ್ ತೆರಿಗೆಯನ್ನು ಕಾಲಕಾಲಕ್ಕೆ ಸರ್ಕಾರದಿಂದ ನಿಗಧಿ ಪಡಿಸುವ ದರಗಳ ಆಧಾರದ ಮೇಲೆ ವಿಧಿಸಿ ವಸೂಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
 2. ಸೆಕ್ಷನ್ 4: ಸದರಿ ಕಾಯ್ದೆಯಡಿಯಲ್ಲಿ ಗ್ರಾಹಕರಿಂದ ವಿದ್ಯುತ್ ತೆರಿಗೆಯನ್ನು ವಸೂಲಿ ಮಾಡಲು, ಅವಕಾಶ ಕಲ್ಪಿಸಲಾಗಿದೆ.
 3. ನಿಯಮ 5: ಸದರಿ ನಿಯಮದಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾದಾರರು/ಬಳಕೆದಾರರು ನಿಯಮಾನುಸಾರ ನಮೂನೆ ಬಿ (ಲೈಸನ್ಸಿದಾರರು) & ನಮೂನೆ ಜಿ (ನಾನ್ ಲೈಸನ್ಸುದಾರರು) ಉತ್ಪಾದನೆ/ಬಳಕೆಯಿಂದ ಮಾಹಿತಿಯನ್ನು ಸಲ್ಲಿಸಬೇಕಾಗಿರುತ್ತದೆ.
 4. ಸೆಕ್ಷನ್ 8: ಸದರಿ ಕಾಯ್ದೆಯಡಿಯಲ್ಲಿ ಕರ್ನಾಟಕ ಸರ್ಕಾರವು ವಿದ್ಯುತ್ ತೆರಿಗೆ ದರವನ್ನು ಕಡಿತಗೊಳಿಸಲು ಅಥವಾ ವಿದ್ಯುತ್ ತೆರಿಗೆ ಪಾವತಿಯಿಂದ ವಿನಾಯತಿ/ರಿಯಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ.

   V. ಯಾರು ವಿದ್ಯುತ್ ತೆರಿಗೆಯನ್ನು ಸಂದಾಯ ಮಾಡಬೇಕು?

 1. ವಿದ್ಯುತ್ ಸರಬರಾಜು ಸಂಸ್ಥೆಯಿಂದ ಸರಬರಾಜುಗೊಂಡ/ಬಳಸಿದ ವಿದ್ಯುತ್ ಗೆ ಶೇ 9%
 2. ತೆರಿಗೆ ಪಾವತಿಸಬೇಕು.
 3. ಯಾವುದೇ ಮೂಲದಿಂದ ಉತ್ಪಾದಿಸಿದ ಸ್ವ-ವಿದ್ಯುತ್ ಉತ್ಪಾದನೆ ಮತ್ತು ಸಂತ ಬಳಕೆ/ಅಕ್ಸಲರಿ ಬಳಕೆ ಮೇಲಿನ ತೆರಿಗೆಯನ್ನು ಸರ್ಕಾರದ ಆದೇಶದ ಮೇರೆಗೆ ಪಾವತಿಸತಕ್ಕದ್ದು.

   VI. ವಿಳಂಬ ಪಾವತಿ ಮೇಲೆ ಬಡ್ಡಿ ವಿಧಿಸುವಿಕೆ.

 1. ವಿದ್ಯುತ್ ತೆರಿಗೆ ವಿಳಂಬವಾಗಿ ಸಂದಾಯ ಮಾಡಿದ್ದಲ್ಲಿ ವಾರ್ಷಿಕ ಶೇ 15/% ರಂತೆ ಬಡ್ಡಿಯನ್ನು ವಿಧಿಸುವುದು. ವೀಕ್ಷಿಸಿ.
 2. ವಿದ್ಯುತ್ ತೆರಿಗೆ ಪಾವತಿಸದಿದ್ದಲ್ಲಿ ಭೂಕಂದಾಯ ಬಾಕಿ ಯಡಿಯಲ್ಲಿ ವಸೂಲಿ ಮಾಡಲು ಕ್ರಮ ಜರುಗಿಸುವುದು.
×
ABOUT DULT ORGANISATIONAL STRUCTURE PROJECTS