ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ

ಇಂಧನ ಇಲಾಖೆ

ಮೇಲ್ಛಾವಣೆಯ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಸುರಕ್ಷತಾ ಅನುಮೋದನೆ ಪಡೆದುಕೊಳ್ಳುವುದು

ಅನುಮೋದನೆ ಪ್ರಾಧಿಕಾರದ ವಿವರಗಳು

  1. 10kwp ಸಾಮರ್ಥ್ಯದ ವರೆಗಿನ ಸೋಲಾರ್ ಅಳವಡಿಸಲು ಬೆಸ್ಕಾಂ ನ ಉಪವಿಭಾಗ AEE ನಲ್ಲಿ ಅರ್ಜಿ ಹಾಕಿ ಸುರಕ್ಷತಾ ಅನುಮತಿ ಪತ್ರವನ್ನು ಪಡೆಯಬೇಕು.
  2. 10kwp ಯಿಂದ 100kwp ವರೆಗಿನ ಸೋಲಾರ್ ಅಳವಡಿಸಲು ವಿದ್ಯುತ್ ಪರಿವೀಕ್ಷಣಾ ಇಲಾಖೆಯಲ್ಲಿನ ಹೆಚ್ಚುವರಿ ಮುಖ್ಯ ವಿದ್ಯುತ್ ಪರಿವೀಕ್ಷಾಣಾಧಿಕಾರಿ ಯಿಂದ ಅನುಮತಿ ಪತ್ರ ಪಡೆಯಬೇಕು.(ಕಾರ್ಯ ವ್ಯಾಪ್ತಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)
  3. 100kwp ಗಿಂತ ಹೆಚ್ಚಿನ ಸಾಮರ್ಥ್ಯಉಳ್ಳ ಸೋಲಾರ್ ಅಳವಡಿಸಲು ಮುಖ್ಯ ವಿದ್ಯುತ್ ಪರಿವೀಕ್ಷಕರಲ್ಲಿ(CEIG) ಅರ್ಜಿ ಹಾಕಿ ಅವರಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು.

ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲು ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಲು ಅನುಸರಿಸಬೇಕಾದ ವಿಧಾನ.

    ವಿದ್ಯುತ್ ಪರೀಕ್ಷಾಧಿಕಾರಿ ಇಲಾಖೆಯಿಂದ ಸುರಕ್ಷತಾ ಪ್ರಮಾಣಪತ್ರ ಪಡೆಯುವ ವಿಧಾನಗಳಲ್ಲಿ ಎರಡು ಹಂತಗಳನ್ನು ಹೊಂದಿರುತ್ತದೆ ಅವುಗಳೆಂದರೆ:
    ಹಂತ: I: ಸೌರ ಘಟಕಕ್ಕೆ ಸಂಭಂದಿಸಿದ ಮೇಲ್ಚಾವಣಿಯ ವಿದ್ಯುತ್ ರೇಖಾಚಿತ್ರವನ್ನು ನೀಡಿ ಅನುಮತಿ ಪಡೆಯಬೇಕು.
    ಹಂತ: II: ನಂತರ ಸೌರ ಘಟಕದ ಅನುಸ್ಥಾಪನೆ(Installation) ಪೂರ್ಣವಾದ ನಂತರ ಇಲಾಖೆಯಿಂದ ಪರಿಶೀಲನೆ ಮತ್ತು ಪರಿಶೀಲನಾ ಪತ್ರವನ್ನು ಪಡೆಯಬೇಕು.

ಹಂತ- I:

ಮೇಲ್ಛಾವಣಿಯ ಸೌರ ಘಟಕಕ್ಕೆ ಸಂಬಂಧಿಸಿದ ವಿದ್ಯುತ್ ಚಿತ್ರಗಳನ್ನು ಅನುಮೋದನೆ

     ಸೌರ ಘಟಕದ ಅನುಮೋದನ ರೇಖಾ ಚಿತ್ರಗಳ ಅನುಮತಿಗೆ ಈ ಕೆಳಗಿನ ಧಾಖಲೆಕಳು ಮತ್ತು ನಿಯಮಗಳನ್ನು ಅನುಸರಿಸಬೇಕು:
    1. ಮಾಲಿಕರು/ಹಿಡುವಳಿದಾರರು ಮೊದಲು ಕೋರಿಕೆಯ ಪತ್ರ ಸಲ್ಲಿಸಬೇಕು.
    2. ನಕ್ಷೆ ಯಲ್ಲಿ ಸೌರಘಟಕ ಅಳವಡಿಕೆಯ ಒಂದು ಸಾಲಿನ(single line) ಇಂಡಿಕೇಟಿಂಗ್ ರೇಟಿಂಗ್, ಗಾತ್ರ ಮತ್ತು ರಕ್ಷಣೆಯ ವಿವರಗಳು, ಲೋಡ್ ವಿವರಗಳು, ನಿವ್ವಳ ಮಾಪಕ ವ್ಯವಸ್ಥೆಗಳನ್ನು(Bidirectional) ತೋರಿಸುವ ರೇಖಾಚಿತ್ರವನ್ನು ಸಲ್ಲಿಸಬೇಕು.
    3. ಸೈಟ್ ಪ್ಲಾನ್ ನಂತೆ ಸೌರಘಟಕದ ಉಪಕರಣಗಳ ವಿವರವಿರಬೇಕು.
    4. ಸೌರ ಘಟಕದ ರೇಖಾಚಿತ್ರ, ಎಲ್ಲಾ ಸುತ್ತಿನ ಪರವಾನಗಿಗಳನ್ನು ತೋರಿಸುವ ಪಲಕ, ನಿಯಂತ್ರಣ ಪಲಕ ಮತ್ತು ಇತ್ಯಾದಿ.
    5. ಅನುಸ್ಥಾಪನೆಗೆ ಬೇಕಾಗುವ ಅರ್ಥಿಂಗ್ ಪ್ರಸ್ತಾಪಿಸುವ ವಿವರಗಳು.
    6. ವಿದ್ಯುತ್ ರೇಖಾಚಿತ್ರದ ಅನುಮೋದನೆಗೆ ನೀಡಿದ ಹಣದ ರಸೀದಿ/ಚಲನ್
    7. ಸರಬರಾಜು ಮಾಡಿರುವ ಕಂಪನಿಯು ನೀಡಿರುವ NoC ಗ್ರಾಹಕರ ಅನುಸ್ಥಾಪನೆಯ ಆರ್ ಆರ್ ಸಂಖ್ಯೆ
    8. KREDL ನೀಡಿರುವ NoC, MNRE ನೀಡಿರುವ ಗ್ರಾಹಕರ ಹಕ್ಕಿನಂತೆ ಸಬ್ಸಿಡಿಗಳು.
    9. LEC ಪರವಾಗಿ ಪರವಾನಗಿ ವಿದ್ಯುತ್ ಗುತ್ತಿಗೆದಾರ ಮತ್ತು ಮೇಲ್ವಿಚಾರಕ ಪರವಾನಿಗೆ ಪ್ರತಿ.
    10. ಅಫಿಡವಿಟ್ -8(ಅಫಿಡವಿಟ್ ಡೌನ್ಲೋಡ್-8): ಅನುಸ್ಥಾಪನ ಮಾಲಿಕರ ಪರವಾಗಿ ವಿದ್ಯುತ್ ಗುತ್ತಿಗೆದಾರನ ಪರವಾನಗಿ.
    11. ಫಾರ್ಮ್ Z(ಫಾರ್ಮ್ ಡೌನ್ಲೋಡ್ Z): ವಿದ್ಯುತ್ ಗುತ್ತಗೆದಾರ ಮತ್ತು ಗ್ರಾಹಕರ ನಡುವೆ ಮಾಡಿಕೊಂಡ ಎಸ್ಟಿಮೇಟ್ ಮತ್ತು ಒಪ್ಪಂದ

ಹಂತ-II:

ಸುರಕ್ಷತೆ ಅನುಮೋದನೆಗಳು ನೀಡಿದ ತಪಾಸಣೆ

    ಸೌರ ಘಟಕದ ಅನುಸ್ಥಾಪನ ಕೆಲಸ ಪೂರ್ಣಗೊಂಡ ನಂತರ ಗ್ರಾಹಕರು ಪೂರ್ವ ನಿಯೋಜಿತ ತಪಾಸಣೆಗೆ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು.
   1. ಮಾಲೀಕರು / ಅನುಸ್ಥಾಪನೆಯ ಹಿಡುವಳಿದಾರನ ಕೋರಿಕೆ ಪತ್ರ
   2. ಕೆಲಸ ಪೂರ್ಣಗೊಂಡ ವರದಿ(FORM-B1) (ಫಾರ್ಮ್ ಡೌನ್ಲೋಡ್ B-1)ತಕ್ಕಂತೆ ವಿದ್ಯುತ್ ಗುತ್ತಿಗೆದಾರ ಕನ್ಸರ್ನ್ಡ್ ಮೇಲ್ವಿಚಾರಕ ಮತ್ತು ನಿರೀಕ್ಷಿತ ಗ್ರಾಹಕರ ಸಹಿ ಇರುವ ವರದಿ.
   3. ಅಧಿಸೂಚನೆ ಪ್ರಕಾರ ಅಗತ್ಯ ತಪಾಸಣೆ ಶುಲ್ಕದ ಸ್ವೀಕೃತಿ/ಚಲನ್.(ಇನ್ಸ್ಪೆಕ್ಷನ್ ಶುಲ್ಕ ವೇಳಾಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ)
   4. ಉತ್ಪಾದಕರು ಸೌರ ವಿದ್ಯುತ್ ಘಟಕ ಅನುಸ್ಥಾಪನ ಮತ್ತು ಕ್ಯಾಲಿಬ್ರೇಶನ್ ವರದಿ ಎನರ್ಜಿ ಮೀಟರ್ ಮತ್ತು ವಿದ್ಯುತ್ ಪರಿವರ್ತಕಗಳು ಮತ್ತು ಯಾವುದೇ ವೇಳೆ ರಕ್ಷಣಾತ್ಮಕ ಪ್ರಸಾರಗಳ ಸಂಪರ್ಕದ ವರದಿಯನ್ನು ನೀಡಬೇಕು.
   5. ಘಟಕದ ಅದಿಕೃತ ವ್ಯಕ್ತಿ, ಅನುಸ್ಥಾಪಕ, ಕಾರ್ಯ ನಿರ್ವಹಿಸುವವರ ಪಟ್ಟಿಯನ್ನು ನೀಡಬಢಕು.
   6. ತಪಾಸಣೆಯ ಸಮಯದಲ್ಲಿ ಗ್ರಾಹಕ/ಎಲೆಕ್ಟ್ರಿಕಲ್ ಮೇಲ್ವಿಚಾರಕರು ವಿದ್ಯುತ್ ಟೆಸ್ಟ್ ಸಲಕರಣೆಯೊಂದಿಗೆ ಹಾಜರಿರಬೇಕು.
   7. ತಪಾಸಣೆ ಸಮಯದಲ್ಲಿ ದೋಷಗಳು ಕಂಡುಬಂದಲ್ಲಿ ಸ್ಥಳದಲ್ಲಿಯೆ ನಿವಾರಿಸಿ ಸಿಇಎ(ಸುರಕ್ಷತೆ ಮತ್ತು ವಿದ್ಯುತ್ ಪೂರೈಕೆ ಸಂಬಂಧಿಸಿದ ಅಳತೆಗಳ) ರೆಗ್ಯುಲೇಷನ್ಸ್ 2010 ಮತ್ತು ಗ್ರಾಹಕರಿಂದ ಸುದಾರಣಾ ವರದಿ ಸಹಿ, ಗುತ್ತಿಗೆದಾರರ ವರದಿ ಸಹಿ. ಇವುಗಳನ್ನು ವಿದ್ಯುತ್ ಪರಿವೀಕ್ಷಣಾದಿಕಾರಿ ನ್ಯಾಯವ್ಯಾಪ್ತಿಯ ಅಧಿಕಾರಿ ಕಳುಹಿಸಬೇಕು.
   8. ನಂತರ ಪರಿಶೀಲಾನಧಿಕಾರಿಯು ಸುರಕ್ಷತಾ ಅನುಮೋದನೆ ನೀಡಿದ ನಂತರ ಸಿಇಎ ನಿಯಂತ್ರಣ 32 ರೆಗ್ಯುಲೇಷನ್ಸ್ 2010 (ಸುರಕ್ಷತೆ ಮತ್ತು ವಿದ್ಯುತ್ ಪೂರೈಕೆ ಸಂಬಂಧಿಸಿದ ಅಳತೆಗಳ) ಅಡಿಯಲ್ಲಿ ಮಂಜೂರು ಮಾಡಲಾಗುತ್ತದೆ
×
ABOUT DULT ORGANISATIONAL STRUCTURE PROJECTS