ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ

ಇಂಧನ ಇಲಾಖೆ

ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೇಯರ್ ನಿರ್ಮಿಸುವುದಕ್ಕಾಗಿ ಅನುಮತಿ

ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೇಯರನ್ನು ಅಳವಡಿಸಲು ಅಥವಾ ಸ್ಥಾಪಿಸಲು ಉದ್ದೇಶಿಸಿ ಪ್ರತಿಯೊಬ್ಬ ಮಾಲೀಕನು ಈ ಕೆಳಕಂಡ ದಾಖಲೆಗಳನ್ನು ನೀಡತಕ್ಕದ್ದು:

  1. ನೊಂದಾಯಿತ ಲಿಫ್ಟ್ ಸಂಸ್ಥೆಯು ಲಿಫ್ಟ್ ಸ್ಥಾಪನೆಗೆ ಬಳಸಲಾಗುವ ಎಲ್ಲಾ ವಸ್ತುಗಳು ಮತ್ತು ಸಲಕರಣೆಗಳು ಭಾರತೀಯ ಗುಣಮಟ್ಟಗಳ ಬ್ಯೂರೋ ಅನುಸಾರ ಇದೆಯೇ ಎಂದು ಖಾತ್ರಿ ಪಡಿಸಿಕೊಳ್ಳತಕ್ಕದ್ದು.
  2. ಲಿಫ್ಟ್ ಮಾಲೀಕರ ಅರ್ಜಿ (ನಮೂನೆ-A1 ಲಿಫ್ಟ್ ಗಳಿಗೆ ಹಾಗೂ ನಮೂನೆ-A2 ಎಸ್ಕಲೇಟರ್/ಪ್ಯಾಸೆಂಜರ್ ಕನ್ವೆಯರ್)
  3. ಸಮಕ್ಷಮ ಪ್ರಾಧಿಕರದಿಂದ ಅನುಮೋದನೆಗೊಂಡಿರುವ ಕಟ್ಟಡದ ಸಿವಿಲ್ ನಕ್ಷೆ(ನೋಟರಿ ಮಾಡಿಸ ತಕ್ಕದ್ದು).
  4. ಖಾತಾ ಪ್ರಮಾಣ ಪತ್ರ ಮತ್ತು ಇತ್ತೀಚಿಗೆ ತೆರಿಗೆ ಪಾವತಿಸಿದ ರಸೀದಿ.
  5. ಒಂದು ವೇಳೆ ನೊಂದಾಯಿತ ಸಂಸ್ಥೆಯಾಗಿದ್ದಲ್ಲಿ ರಿಜಿಸ್ಟ್ರಾರ್ ಆಫ್ ಕಂನೀಸ್ ರವರು ನೀಡಿರುವ ಮೆಮೊರೆಂಡ್ ಮತ್ತು ಆರ್ಟಿಕಲ್ ಆಫ್ ಅಸೋಸಿಯೆಷನ್ ಅಥವಾ ಪಾಲುದಾರಿಕಾ ಸಂಸ್ಥೆಯಾಗಿದ್ದಲ್ಲಿ ನೋಂದಾಯಿತ ಪಾರ್ಟ್ನರ್ ಶಿಪ್ ಡೀಡ್ ನೀಡತಕ್ಕದ್ದು ಅಧಿಕೃತ ಸಹಿದಾರರಿಗೆ ರೂ 100/-ರ ಛಾಪಾಕಾಗದದ ಮೇಲೆ ನೀಡಿರುವ ಅಥರೈಜೆಷನ್ ಲೆಟರ್.
  6. ನಮೂನೆ-ಎ3 ನಲ್ಲಿ ಲಿಫ್ಟ್ ನೊಂದಾಯಿತ ಸಂಸ್ಥೆಯ ಘೋಷಣೆ.
  7. ಕೆಳಕಂಡ ವಿವರಗಳನ್ನು ತೋರಿಸುವ ಲಿಫ್ಟ್ ಸ್ಥಾವರದ ನಕ್ಷೆಯಲ್ಲಿ ಲಿಫ್ಟ್ ಮಾಲೀಕರು ಹಾಗೂ ನೋಂದಾಯಿತ ಸಂಸ್ಥೆಯು ಸಹಿ ಮಾಡತಕ್ಕದ್ದು ಹಾಗೂ ಸಲ್ಲಿಸತಕ್ಕದ್ದು.:-
(A) ಒಂದು ವೇಳೆ ಲಿಫ್ಟ್ ಆದಲ್ಲಿ:-
1. ಕಟ್ಟಡದಲ್ಲಿ ಲಿಫ್ಟ್ ನ ಸ್ಥಾನ;
2. ಪ್ರತಿಯೊಂದು ಲಿಫ್ಟ್ ಸ್ಥಾವರದ ಜನರಲ್ ಲೇಔಟ್;
3. ಲಿಫ್ಟ್ ಶಾಫ್ಟ್, ಲಿಫ್ಟ್ ಮೆಷಿನ್ ರೂಮ್ ಹಾಗೂ ಲಿಫ್ಟ್ ಕಾರ್ ನ ಪ್ಲಾನ್ ಮತ್ತು ಎಲಿವೇಷನ್;
4. ಲಿಫ್ಟ್ ಬಾಗಿಲುಗಳ ಜೋಡಣೆ ರೀತಿ;
5. ಲಿಫ್ಟ್ ಲ್ಯಾಂಡಿಂಗ್ ಗಳ ವಿವರ ಮತ್ತು ಒಟ್ಟು ಪ್ರಯಾಣದ ಮಹಡಿಗಳ ಸಂಖ್ಯೆ;
6. ಲಿಫ್ಟ್ ವೆಲ್ ಮತ್ತು ಎನ್ ಕ್ಲೋಸರ್;
7. ಲಿಫ್ಟ್ ಭಾವಿಯಲ್ಲಿ ಲಿಫ್ಟ್ ಉಪಕರಣಗಳ ಪ್ರಮಾಣ ಮತ್ತು ಸ್ಥಾನ;
8. ಎತ್ತುವ ಯಂತ್ರದ ಸ್ಥಾನ;
9. ಲಿಫ್ಟ್ ಭಾವಿ, ಮಿಷನ್ ರೂಮ್, ಕಂಟ್ರೋಲ್ ಪ್ಯಾಸಲ್ ಹಾಗು ಇತರೆ ಲಿಫ್ಟ್ ಉಪಕರಣಗಳ ವೈರಿಂಗ್ ಪ್ರಯಗ್ರಾಮ್ ;
10. ಭೂಸಂಪರ್ಕ ವಿಧಾನ ಹಾಗೂ ವಿವರಗಳು;
(B) ಒಂದು ವೇಳೆ ಎಸ್ಕಲೇಟರ್ ಅಥವಾ ಪ್ಯಾಸೆಂಜ್ ಕನ್ವೆಯರ್ ಆದಲ್ಲಿ:-
1. ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೇಯರ್ ನ ಸ್ಥಾನ;
2. ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೇಯರ್ ನ ಜನರಲ್ ಲೇಔಟ್;
3. ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೇಯರ್ ನ ಪ್ಲಾನ್ ಮತ್ತು ಎಲಿವೇಷನ್;
4. ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೇಯರ್ ನ ಇಳಿಜಾರು ಕೋನ;
5. ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೇಯರ್ ನ ಅಗಲ;
6. ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೇಯರ್ ನ ಏರುವ ಪ್ರಮಾಣ;
7. ಟ್ರ್ಯಾಕ್ ಮತ್ತು ಟ್ರಸ್ ಅಥವಾ ಗ್ರಿಡರ್ಸ್ ಗಳ ಜೋಡಣೆ ರೀತಿ;
8. ಮೆಷಿನ್ ರೂಮ್ ನ ಸ್ಥಾನದ ವಿವರಗಳು;
9. ಮೆಷಿನ್ ರೂಮ್, ಕಂಟ್ರೋಲ್ ಪ್ಯಾನೆಲ್ ಹಾಗೂ ಇತರೆ ಉಪಕರಣಗಳ ವೈರಿಂಗ್ ಡಯಾಗ್ರಾಮ್;
10. ಯಂತ್ರ ಕೋಣೆಯ ವೈರಿಂಗ್ ನಕ್ಷೆ, ನಿಯಂತ್ರಣಫಲಕ, ಮತ್ತು ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೇಯರ್ ಉಪಕರಣಗಳು;
11. ಮೈನ್ ಸ್ವಿಚ್ ಅಥವಾ ಪ್ಯಾಸಲ್ ನ ಸ್ಥಾನ;
12. ಭೂಸಂಪರ್ಕ ವಿಧಾನ ಹಾಗೂ ವಿವರಗಳು.
 1. ಶುಲ್ಕ ರೂ 1000/- ಪಾವತಿಸಿದ ಮೂಲ ರಸೀದಿ ಅಥವಾ ಚಲನ್(ಸರ್ಕಾರಿ ಖಜಾನೆಗೆ ಹಣ ಜಮಾ ಮಾಡಿದ ರಸೀದಿ ಅಥವಾ ಬ್ಯಾಂಕ್ ಅಕೌಂಟ್ ನಂ "0043" ಖಾತೆಗೆ ಜಮಾ ಮಾಡಿದ ಚಲನ್)ಲಗತ್ತಿಸತಕ್ಕದ್ದು.
 2. ಮೇಲಿನ ಎಲ್ಲಾ ದಾಖಲೆಗಳನ್ನು ಸಂಬಂಧಿತ ಅಮುವಿಪ/ಉಮವಿಪ ರವರ ಕಚೇರಿಯಲ್ಲಿ ಸಲ್ಲಿಸತಕ್ಕದ್ದು.(ಕಚೇರಿ ಸ್ಥಳ ನೋಡಲು ಇಲ್ಲಿ ಕ್ಲಿಕ್ಕಿಸಿ)

ACEI or DCEI ಅಡಿಯಲ್ಲಿ ಲಿಫ್ಟ್ ನಿರ್ಮಿಸುವುದಕ್ಕಾಗಿ ಅನುಮತಿ, ಅಪ್ಲಿಕೇಶನ್ ಮತ್ತು ಎನ್ಕ್ಲೋಷರ್ ಗಳ ಆರ್ಡರ್:

ಸ್ಥಾಪನಾ ಅನುಮತಿಯು, ಅದನ್ನು ನೀಡಿದ ದಿನಾಂಕದಿಂದ ಹನ್ನೆರಡು ತಿಂಗಳವರೆಗಿನ ಅವಧಿಗೆ ಮಾತ್ರ ಸಿಂಧುವಾಗಿರುತ್ತದೆ. ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರಿನ ಅಳವಡಿಕೆಯು ಅನುಮತಿಯ ಸಿಂಧುತ್ವದ ಅವದಿಯೊಳಗೆ ಪೂರ್ಣಗೊಳಿಸದಿದ್ದ ಸಂದರ್ಭದಲ್ಲಿ ಹೊಸದಾಗಿ ಅರ್ಜಿಯನ್ನು ಸಲ್ಲಿಸುವ ಮೂಲಕ ಅದನ್ನು ನವೀಕರಿಸಕೊಳ್ಳತಕ್ಕದ್ದು.


ಅನುದಾನಿತ ನಕ್ಷೆ ಹಾಗೂ ಲಿಫ್ಟ್ ಅದಿನಿಯಮ ಹಾಗೂ ನಿಯಮಗಳ ಅನುಸಾರ ಲಿಫ್ಟ್ ಸ್ಥಾಪನಾ ಕಾರ್ಯ ನಿರ್ವಹಿಸತಕ್ಕದ್ದು, ಹಾಗೂ ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ಸ್ಥಾಪನೆಗೆ ಯಾವುದೇ ಸೇರ್ಪಡೆಗಳನ್ನು ಅಥವಾ ಬದಲಾವಣೆಗಳನ್ನು ಮಾಡಲು ಉದ್ದೇಶಿಸಿರುವ ಮಾಲೀಕರು, ಮೇಲ್ಕಂಡ ಎಲ್ಲಾ ದಾಖಲೆಗಳೊಂದಿಗೆ ಉದ್ದೇಶಿತ ಸೇರ್ಪಡೆ ಅಥವಾ ಬದಲಾವಣೆಗಳನ್ನು ತೋರಿಸುವ ಡ್ರಾಯಿಂಗ್ ಗಳನ್ನು ಸಲ್ಲಿಸತಕ್ಕದ್ದು.

×
ABOUT DULT ORGANISATIONAL STRUCTURE PROJECTS