ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ

ಇಂಧನ ಇಲಾಖೆ

ಸಿನಿಮಾ

ಸಿನಿಮಾ

ಚಲನಚಿತ್ರ ದರ್ಶಕ ಪ್ರದರ್ಶನಗೊಳ್ಳುವ ಸ್ಥಳಗಳ ಪರವಾನಗಿ ಹಾಗು ಅದರ ಪ್ರದರ್ಶನದ ನಿಯಮಗಳು ಕರ್ನಾಟಕ ಸರ್ಕಾರದ, ಕರ್ನಾಟಕ ಸಿನಿಮಾಸ್ (ನಿಯಂತ್ರಣ) ನಿಯಮಗಳು 2014ರ ಹಾಗೂ ತಿದ್ದುಪಡಿ ನಿಯಮ 2022ರ  ಅಡಿಯಲ್ಲಿ ಸೂಚಿಸಲಾಗಿದೆ ಹಾಗು ಇದರ ನಿಯಮಗಳು ಕರ್ನಾಟಕ ಸಿನಿಮಾಸ್(ನಿಯಂತ್ರಣ) ಆ್ಯಕ್ಟ್ 1964 ಇದರಂತೆ ಸೂಚಿಸಲಾಗಿದೆ.

 

ಕರ್ನಾಟಕ ಸಿನಿಮಾಸ್(ರೆಗ್ಯುಲೇಷನ್) ಆ್ಯಕ್ಟ್ 1964, ರಾಜ್ಯ ಶಾಸಕಾಂಗವು, ಅಧಿಸೂಚನೆ-II No. HD 50 CAN 62, ದಿನಾಂಕ 06-03-1971, ಕರ್ನಾಟಕ ಗೆಜೆಟ್ ದಿನಾಂಕ 10-03-1971 ರಲ್ಲಿ ಸೂಚಿಸಿದೆ ಹಾಗು 15-03-1971 ರಂದು ಜಾರಿಗೆ ತಂದಿದೆ.

 

ಅಧಿಕಾರಿಗಳ ಸೂತ್ರಗಳನ್ನು ಕರ್ನಾಟಕ ಸಿನಿಮಾಸ್(ರೆಗ್ಯುಲೇಶನ್) ಆಕ್ಟ್ 1964 ವಿಭಾಗ 19, ಕರ್ನಾಟಕ ಸಿನಿಮಾಸ್(ರೆಗ್ಯುಲೇಶನ್) ನಿಯಮ 2014ರ ಹಾಗೂ ತಿದ್ದುಪಡಿ ನಿಯಮ 2022ರ,   ಇವುಗಳ ವಿವರಗಳು ಅದಿಸೂಚನೆ-No. HD 12 CAN 2010, ದಿನಾಂಕ 7-10-2014, ಕರ್ನಾಟಕ ಅಸಾಮಾನ್ಯ ಗೆಜೆಟ್ ನಂ 635(ಭಾಗ IV ಎ) ದಿನಾಂಕ 7-10-2014ರಲ್ಲಿ ಸೂಚಿಸಿದೆ, ಕರ್ನಾಟಕ ಸಿನಿಮಾಸ್(ರೆಗ್ಯುಲೇಷನ್) ನಿಯಮಗಳ 1971ನ್ನು ರದ್ದುಪಡಿಸಲಾಗಿದೆ.

 

ಪ್ರತಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಅಥವಾ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರ್ ಇವರುಗಳ ಚಿತ್ರಗಳ ಪ್ರದರ್ಶನಗಳ ಪರವಾನಗಿಗಳನ್ನು ಕರ್ನಾಟಕ ಸಿನಿಮಾಸ್(ರೆಗ್ಯುಲೇಶನ್) ಆಕ್ಟ್ 1964 ಅಡಿಯಲ್ಲಿ ಪೂರೈಸುವ ಅಧಿಕಾರವು ಜಿಲ್ಲಾಧಿಕಾರಿ ಚಲಾಯಿಸಲು ಅಧಿಕಾರವನ್ನು ಹೊಂದಿರುತ್ತಾರೆ.

 

ಯಾವುದೇ ವ್ಯಕ್ತಿಯು ಚಲನಚಿತ್ರ ಪ್ರದರ್ಶನ ಸ್ಥಳವನ್ನು ಉಪಯೋಗಿಸಲು ಅಥವಾ ಪ್ರದರ್ಶನಕ್ಕೆ ಕಟ್ಟಡವನ್ನು ನಿರ್ಮಿಸಲು ಅಥವಾ ಚಲನಚಿತ್ರದ ಯಾವುದೆ ಯಂತ್ರಗಳನ್ನು ಅನುಸ್ಥಾಪಿಸಲು ಆಕ್ಷೇಪಣೆ ಇಲ್ಲ ಎಂಬ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಪರವಾನಗಿ ಪ್ರಾಧಿಕಾರದಿಂದ ಪಡೆದಿರಬೇಕು.

 

ಆಕ್ಷೇಪಣೆ ಇಲ್ಲ ಎಂಬ ಪ್ರಮಾಣ ಪತ್ರವನ್ನು ಪಡೆದ ನಂತರ ವ್ಯಕ್ತಿಯು ಚಲನಚಿತ್ರ ಪ್ರದರ್ಶನದ ಕಟ್ಟಡದ ನಿರ್ಮಾಣದ ಅನುಮೋದನೆಗೆ ಎಲ್ಲಾ ಉಪಕರಣಗಳ ತಾಂತ್ರಿಕ ವಿವರಗಳೊಂದಿಗೆ ಎಲ್ಲಾ ವೈರಿಂಗ್ ಸಂಪೂರ್ಣ ವಿದ್ಯುತ್ ಅನುಸ್ಥಾಪನೆಯ ವಿವರಣೆ, ಡಿಸ್ಟ್ರಿಬ್ಯೂಷನ್ ಮೀಟರ್ ಬೋರ್ಡ್ ಹಾಗು ಇತರೆ ವಿದ್ಯುತ್ ಉಪಕರಣದ ವಿವರಗಳೊಂದಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು.

 

ನಂತರ ಪರವಾನಗಿ ಪ್ರಾಧಿಕಾರವು, ಏಕಕಾಲದಲ್ಲಿ ನಿರ್ದೇಶಕರು ಮತ್ತು ಸಂಬಂಧಪಟ್ಟ ಇತರ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ವಿವರಗಳನ್ನು ವಿದ್ಯುತ್ ಪರಿವೀಕ್ಷಕರಿಗೆ ವಿದ್ಯುತ್ ಅನುಸ್ಥಾಪನಕ್ಕೆ ಸಂಬಂಧಿಸಿದ ವಿನ್ಯಾಸಗಳನ್ನು ಪರೀಕ್ಷಿಸಲು ಕಳುಹಿಸಿಕೊಡಲಾಗುತ್ತದೆ. ಇವರುಗಳು ವಿದ್ಯುತ್ ಅನುಸ್ಥಾಪನ ವಿವರಗಳು ಹಾಗು ವಿದ್ಯುತ್ ಸುರಕ್ಷತೆಯ ವಿವರಗಳಿಗೆ ಸಂಬಂಧಿಸಿದ ವರದಿಯನ್ನು ನಿಯಮಗಳ ಅನುಸಾರವಾಗಿದೆ ಎಂಬ ವರದಿಯನ್ನು ಪರವಾನಗಿ ಪ್ರಾದಿಕಾರಕ್ಕೆ ಕಳುಹಿಸಿಕೊಡಲಾಗುತ್ತದೆ.

 

ವಿವಿಧ ರೀತಿಯ ಸಿನಿಮಾ ಮಂದಿರದ ವಿದ್ಯುತ್ ಫಿಟ್ನೆಸ್ ಪ್ರಮಾಣ ಪತ್ರವು ಮುಖ್ಯ ವಿದ್ಯುತ್‌ ಪರಿವೀಕ್ಷಕರಿಂದ ಹಾಗು ವಿವಿಧ ವ್ಯಾಪ್ತಿಯ ಅಧಿಕಾರಿಗಳಿಂದ ನೀಡಲಾಗುತ್ತದೆ.

ಕ್ರಮ ಸಂಖ್ಯೆ

ಸಿನಿಮಾ ವಿಧಾನ

ಚಿತ್ರಗಳ ಅನುಮೋದನೆ

ಪರಿಶೀಲಿಸುವ ಪ್ರಾಧಿಕಾರ

ವಿದ್ಯುತ್ ಪ್ರಮಾಣಪತ್ರ ವಿತರಣಾ ಅಧಿಕಾರಿಗಳು

ಆರಂಭಿಕ ತಪಾಸಣೆ

ನಿಯತಕಾಲಿಕ ತಪಾಸಣೆ

1. ಮಲ್ಟಿಪ್ಲೆಕ್ಸ್ ಥಿಯೇಟರ್ಸ್ ಸರ್ಕಾರದ ಮುಖ್ಯ ವಿದ್ಯುತ್
ಪರಿವೀಕ್ಷಕರು
ಸರ್ಕಾರದ ಮುಖ್ಯ ವಿದ್ಯುತ್
ಪರಿವೀಕ್ಷಕರು.
ಹೆಚ್ಚುವರಿ ಮುಖ್ಯ ವಿದ್ಯುತ್ ಪರಿವೀಕ್ಷಕರು. ಸರ್ಕಾರದ ಮುಖ್ಯ ವಿದ್ಯುತ್
ಪರಿವೀಕ್ಷಕರು.
2. ಖಾಯಂ ಸಿನಿಮಾಗಳು ಹೆಚ್ಚುವರಿ ಮುಖ್ಯ ವಿದ್ಯುತ್ ಪರಿವೀಕ್ಷಕರು. ಹೆಚ್ಚುವರಿ ಮುಖ್ಯ ವಿದ್ಯುತ್ ಪರಿವೀಕ್ಷಕರು. ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು. ಆರಂಭದಲ್ಲಿ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರು. & ತರುವಾಯ ಹೆಚ್ಚುವರಿ ಮುಖ್ಯ ವಿದ್ಯುತ್ ಪರಿವೀಕ್ಷಕರು.
3. ಅರೆ ಖಾಯಂ ಸಿನಿಮಾಗಳು. ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು. ವಿದ್ಯುತ್ ಪರಿವೀಕ್ಷಕರು. ವಿದ್ಯುತ್ ಪರಿವೀಕ್ಷಕರು. ವಿದ್ಯುತ್ ಪರಿವೀಕ್ಷಕರು.

4.

ಟೂರಿಂಗ್ ಸಿನಿಮಾಗಳು ------ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು. ಉಪ ವಿದ್ಯುತ್ ಪರಿವೀಕ್ಷಕರು. ಉಪ ವಿದ್ಯುತ್ ಪರಿವೀಕ್ಷಕರು.
5. ನವೀಕರಿಸಲಾದ ಸಿನಿಮಾಗಳು ----- ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು. ---- ಹೆಚ್ಚುವರಿ ಮುಖ್ಯ ವಿದ್ಯುತ್ ಪರಿವೀಕ್ಷಕರು.
6. ಜಾತ್ರೆಗಳು ಮತ್ತು ಮೇಳಗಳಲ್ಲಿನ ತಾತ್ಕಾಲಿಕ ಸಿನಿಮಾಗಳು ಹಾಗೂ ವಿಡಯೋಗಳು --- ----- ಉಪ ವಿದ್ಯುತ್ ಪರಿವೀಕ್ಷಕರು. ಉಪ ವಿದ್ಯುತ್ ಪರಿವೀಕ್ಷಕರು.

ಮೇಲಿನ ವಿಷಯಗಳ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಕೆಳಗೆ ಕೊಟ್ಟಿರುವ ಪಟ್ಟಿಯನ್ನು ಕ್ಲಿಕ್ಕಿಸಿ


1.

ಖಾಯಂ ಸಿನಿಮಾ ಮತ್ತು ಅರೆ ಖಾಯಂ ಸಿನಿಮಾಗಳ ನಕ್ಷೆ ಅನುಮೋದನೆ

ಪ್ರೊಸಿಜರ್ ವೀಕ್ಷಿಸಿ

2.

ಖಾಯಂ ಸಿನಿಮಾ ಮತ್ತು ಅರೆ ಖಾಯಂ ಸಿನಿಮಾಗಳ ಎಲೆಕ್ಟ್ರಿಕಲ್ ಫಿಟ್ನೆಸ್ ಪ್ರಮಾಣಪತ್ರಗಳು ಪ್ರೊಸಿಜರ್ ವೀಕ್ಷಿಸಿ

3.

ಖಾಯಂ ಸಿನಿಮಾ ಮತ್ತು ಅರೆ ಖಾಯಂ ಸಿನಿಮಾಗಳ ಎಲೆಕ್ಟ್ರಿಕಲ್ ಫಿಟ್ನೆಸ್ ಪ್ರಮಾಣಪತ್ರಗಳ ಮರುಅನುದಾನ/ನವೀಕರಣ (Regrant/Renewal) ಪ್ರೊಸಿಜರ್ ವೀಕ್ಷಿಸಿ

4.

ಟೂರಿಂಗ್ ಚಿತ್ರಮಂದಿರಗಳಿಗೆ ಹಾಗೂ ಡ್ರೈವ್-ಇನ್ ಚಿತ್ರಮಂದಿರಗಳಿಗೆ ಎಲೆಕ್ಟ್ರಿಕಲ್ ಫಿಟ್ನೆಸ್ ಪ್ರಮಾಣಪತ್ರಗಳನ್ನು ನೀಡುವುದು ಪ್ರೊಸಿಜರ್ ವೀಕ್ಷಿಸಿ

5.

ಟೂರಿಂಗ್ ಚಿತ್ರಮಂದಿರಗಳಿಗೆ ಹಾಗೂ ಡ್ರೈವ್-ಇನ್ ಚಿತ್ರಮಂದಿರಗಳಿಗೆ ಎಲೆಕ್ಟ್ರಿಕಲ್ ಫಿಟ್ನೆಸ್ ಪ್ರಮಾಣಪತ್ರಗಳ ಮರುಅನುದಾನ/ನವೀಕರಣ (Regrant/Renewal) ಪ್ರೊಸಿಜರ್ ವೀಕ್ಷಿಸಿ

6.

ವಿಡಿಯೋ ಕ್ಯಾಸೆಟ್ ರೆಕಾರ್ಡರ್ ಅಥವಾ ಲೇಸರ್ ಡಿಸ್ಕ್ ಮೂಲಕ ಟೆಲಿವಿಷನ್ ಸ್ಕ್ರೀನ್ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಎಲೆಕ್ಟ್ರಿಕಲ್ ಫಿಟ್ನೆಸ್ ಪ್ರಮಾಣಪತ್ರಗಳನ್ನು ನೀಡುವುದು ಪ್ರೊಸಿಜರ್ ವೀಕ್ಷಿಸಿ

7.

ವಿಡಿಯೋ ಕ್ಯಾಸೆಟ್ ರೆಕಾರ್ಡರ್ ಅಥವಾ ಲೇಸರ್ ಡಿಸ್ಕ್ ಮೂಲಕ ಟೆಲಿವಿಷನ್ ಸ್ಕ್ರೀನ್ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಎಲೆಕ್ಟ್ರಿಕಲ್ ಫಿಟ್ನೆಸ್ ಪ್ರಮಾಣಪತ್ರಗಳ ಮರುಅನುದಾನ/ನವೀಕರಣ (Regrant/Renewal) ಪ್ರೊಸಿಜರ್ ವೀಕ್ಷಿಸಿ
×
ABOUT DULT ORGANISATIONAL STRUCTURE PROJECTS