ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ

ಇಂಧನ ಇಲಾಖೆ

ಹೊಸ ಲಿಫ್ಟ್, ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಚಾಲನಾ ಪರವಾನಗಿ

ಮಾಲೀಕರು ಲಿಫ್ಟ್ ಅಥವಾ ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೇಯರ್ ನಿರ್ಮಾಣಕ್ಕಾಗಿ ಅನುಮತಿ ಪಡೆಯಬೇಕು, ಲಿಫ್ಟ್ ಅಥವಾ ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೇಯರ್ ನಿರ್ಮಾಣ ಪೂರ್ಣಗೊಂಡ ನಂತರ ಪರವಾನಗಿ ಪಡೆಯಲು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು.

 1. ಮಾಲೀಕರ ಅರ್ಜಿ ನಮೂನೆ ಬಿ-1 ನೊಂದಿಗೆ ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸತಕ್ಕದ್ದು.
 2. ನೊಂದಾಯಿತ ಸಂಸ್ಥೆಯ ಕಾರ್ಯಸಮಾಪನ ವರದಿ ನಮೂನೆ ಬಿ-2(ಲಿಫ್ಟ್ ಆದಲ್ಲಿ) ನಮೂನೆ ಬಿ-3(ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ಆದಲ್ಲಿ).
 3. ಈ ಕೆಳಕಂಡ ಉಪಕರಣಗಳ ತಯಾರಕರ ಟೆಸ್ಟ್ ಸರ್ಟಿಫಿಕೇಟ್ ಅನ್ನು ಸಲ್ಲಿಸತಕ್ಕದ್ದು:-
  1. ಲಿಫ್ಟ್ ಆಗಿದ್ದಲ್ಲಿ:-
    1. ಮೋಟಾರ್ ಮತ್ತು ಯಂತ್ರ.
    2. ಓವರ್ ಸ್ಪೀಡ್ ಗವರ್ನರ್.
    3. ನಿಯಂತ್ರಕ.
    4. ಬಫರ್.
    5. ಡೋರ್ ಡ್ರೈವ್.
    6. ಲಿಫ್ಟ್ ಕಾರ್ ಮತ್ತು ಲ್ಯಾಂಡಿಂಗ್ ಡೋರ್ ಗಳ ಫೈಯರ್ ರೇಟಿಂಗ್.
    7. ಎತ್ತುವ ಯಂತ್ರ ಹಾಗು ಗವರ್ನರ್ ರೋಪ್.
    8. ಟ್ರಾವೆಲ್ಲಿಂಗ್ ಕೇಬಲ್.
     1. ಎಸ್ಕಲೇಟರ್ ಮತ್ತು ಪ್ಯಾಸೆಂಜರ್ ಕನ್ವೆಯರ್ ಆಗಿದ್ದಲ್ಲಿ:-
      1. ಮೋಟಾರ್ ಮತ್ತು ಯಂತ್ರ.
      2. ಓವರ್ ಸ್ಪೀಡ್ ಗವರ್ನರ್.
      3. ಕಂಟ್ರೋಲರ್.
     2. ಶುಲ್ಕ ರೂ 2500/- ಪಾವತಿಸಿದ ಮೂಲ ಚಲನ್ ಅಥವಾ ರಶೀದಿಯನ್ನು ಲಗತ್ತಿಸತಕ್ಕದ್ದು
     3. ಮೇಲಿನ ಎಲ್ಲಾ ದಾಖಲೆಗಳನ್ನು ಸಂಬಂಧಿತ ಅಮುವಿವ/ಉಮುವಿವ ರವರ ಕಚೇರಿಗೆ ಸಲ್ಲಿಸತಕ್ಕದ್ದು.(ಕಚೇರಿಯ ವಿಳಾಸ ನೋಡಲು ಇಲ್ಲಿ ಕ್ಲಿಕ್ಕಿಸಿ)

   ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳು ಹಾಗೂ ಸಮಾಪನ ವರದಿಯನ್ನು ಸ್ವೀಕರಿಸಿದ ನಂತರ, ಸಂಬಂಧಿತ ಅಮುವಿಪ/ಉಮುವಿಪ ರವರು ಲಿಫ್ಟ್ ಸ್ಥಾವರ ಮಾಲೀಕರು ಹಾಗೂ ನೊಂದಾಯಿತ ಸಂಸ್ಥೆಯ ಪ್ರತಿನಿಧಿಗಳ ಹಾಜರಾತಿಯಲ್ಲಿ ಲಿಫ್ಟ್ ಸ್ಥಾವರದ ಪರಿವೀಕ್ಷಣೆ ಕೈಗೊಳ್ಳುವರು ಪರಿವೀಕ್ಷಣೆ ವೇಳೆ ಅವಶ್ಯಕ ಪರೀಕ್ಷೆಗಳನ್ನು ನಡೆಸಿ ಹಾಗು ಲಿಫ್ಟ್ ಸ್ಥಾವರವು ಲಿಫ್ಟ್ ಅಧಿನಿಯಮ ಹಾಗೂ ನಿಯಮ, ಭಾರತೀಯ ಗುಣಮಟ್ಟ ಬ್ಯೂರೋ ಪದ್ದತಿಗಳ ಅಸ್ಥಿತ್ವದಲ್ಲಿರುವ ಸಂಬಂಧಪಟ್ಟ ಸಂಹಿತೆ, ಭಾರತೀಯ ವಿದ್ಯುಚ್ಛಕ್ತಿ ಕಾಯಿದೆ, ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ(ಸುರಕ್ಷತೆ ಮತ್ತು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಕ್ರಮಗಳು) ನಿಯಮಗಳು, 2010 ರ ಅನ್ವಯ ಇರುವ ಬಗ್ಗೆ ಖಾತ್ರಿ ಪಡಿಸಿಕೊಂಡ ನಂತರ ಮುಖ್ಯ ವಿದ್ಯುತ್ ಪರಿವೀಕ್ಷಕರಿಗೆ ತಮ್ಮ ಶಿಫಾರಸ್ಸು ಪತ್ರಗಳನ್ನು ಕಳುಹಿಸುತ್ತಾರೆ. ಒಂದು ವೇಳೆ ಪರಿವೀಕ್ಷಣೆ ವೇಳೆ ನ್ಯೂನ್ಯತೆ ಕಂಡು ಬಂದಲ್ಲಿ ನ್ಯೂನ್ಯತೆಗಳನ್ನು ತಿಳಿಸಿ, ಅವುಗಳನ್ನು ಸರಿಪಡಿಸಿ, ಅನುಸರಣಾ ವರದಿಯನ್ನು ನೀಡುವಂತೆ ತಿಳಿಸಲಾಗುವುದು. ತದನಂತರ ಮರುಪರಿಶೀಲನೆ ನಡೆಸಿ ಅನುಸರಣಾ ವರದಿಯನ್ನು ಪರಿಶೀಲಿಸಿದ ನಂತರ ಮುಖ್ಯ ವಿದ್ಯುತ್ ಪರಿವೀಕ್ಷಕರಿಗೆ ಶಿಫಾರಸ್ಸು ಪತ್ರ ಕಳುಹಿಸಲಾಗುವುದು.

   ಲೈಸೆನ್ಸ್ ಪಡೆದ ನಂತರ ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ನ ಪ್ರತಿಯೊಬ್ಬ ಮಾಲೀಕರು ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ನ್ನು ಶುಚಿ ಮಾಡುವುದು, ಎಣ್ಣೆ ಹಾಕುವುದು, ಸರಿ ಹೊಂದಿಸುವುದು ಮತ್ತು ದುರಸ್ಥಿ ಮಾಡುವುದು ಸೇರಿದಂತೆ ತೃಪ್ತಿಕರ ನಿರ್ವಹಣೆಗಾಗಿ, ನೊಂದಾಯಿತ ವ್ಯಕ್ತಿಯೊಂದಿಗೆ ಒಪ್ಪಂದ ಮಾಡಿಕೊಳ್ಳತಕ್ಕದ್ದು.

   ಪ್ರಾಧಿಕೃತ ಅಧಿಕಾರಿ ಅಥವಾ ಲಿಫ್ಟ್ ಗಳ ಅಥವಾ ಎಸ್ಕಲೇಟರ್ ಗಳ ಅಥವಾ ಪ್ಯಾಸೆಂಜರ್ ಕನ್ವೆಯರ್ ಗಳ ತಪಾಸಣಾಧಿಕಾರಿಯು, ಸೂಕ್ತ ನೋಟೀಸನ್ನು ನೀಡಿದ ತರುವಾಯ, ಯಾವ ಕಟ್ಟಡದಲ್ಲಿ ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ನ್ನು ಸ್ಥಾಪಿಸಲಾಗಿದೆಯೋ ಅಥವಾ ಸ್ಥಾಪಿಸಲಾಗುತ್ತಿದೆಯೋ ಅಥವಾ ಯಾವುದರ ಸಂಬಂಧದಲ್ಲಿ ಲೈಸೆನ್ಸ್ ಗಾಗಿ ಒಂದು ಅರ್ಜಿಯನ್ನು ಸ್ವೀಕರಿಸಲಾಗಿದೆಯೋ ಆ ಯಾವುದೇ ಕಟ್ಟಡವನ್ನು ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ನ ಸ್ಥಾಪನೆಯ ಪರಿಶೀಲನೆ ಅಥವಾ ಅನ್ಯಥಾ ಆ ಸ್ಥಳದ ಪರಿಶೀಲನೆಯ ಉದ್ದೇಶಕ್ಕಾಗಿ ಯಾವುದೇ ಸಮಯದಲ್ಲಿ ಪ್ರವೇಶಿಸಬಹುದು, ಯಾವುದೇ ಕಟ್ಟಡದಲ್ಲಿ, ಯಾವುದೇ ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೇಯರ್ ಸುರಕ್ಷಿತವಲ್ಲದ ಸ್ಥಿತಿಯಲ್ಲಿದೆ ಎಂಬುದಾಗಿ ಅರಿತು ಪರಿಶೀಲನೆಯ ನಂತರ ಪ್ರಾಧಿಕೃತ ಅಧಿಕಾರಿ ಅಥವಾ ತಪಾಸಣಾಧಿಕಾರಿಯು ಅಭಿಪ್ರಾಯಪಟ್ಟರೆ, ಅವನು ಕಟ್ಟಡದ ಮಾಲೀಕ ಅಥವಾ ಏಜೆಂಟರಿಗೆ ಅಂತ ಲಿಫ್ಟ್ ಗೆ ಅವನು ಅವಶ್ಯವೆಂದು ಭಾವಿಸಬಹುದಾದ ಅಂಥ ದುರಸ್ತಿ ಅಥವಾ ಬದಲಾವಣೆಗಳನ್ನು, ಅದರಲ್ಲಿ ನಿರ್ದಿಷ್ಟ ಪಡಿಸಿದ ಸಮಯದೊಳಗೆ ಮಾಡಬೇಕೆಂದು ಅಗತ್ಯಪಡಿಸಿ ಆದೇಶವನ್ನು ಹೊರಡಿಸಬಹುದು ಮತ್ತು ಅವಶ್ಯವಿದ್ದರೆ ಅಂಥ ದುರಸ್ತಿಗಳು ಅಥವಾ ಬದಲಾವಣೆಗಳನ್ನು ಮಾಡುವವರೆಗೆ ಅಥವಾ ಅಂಥ ಸುರಕ್ಷಿತವಲ್ಲದ ಪರಿಸ್ಥಿತಿಯು ನಿವಾರಣೆಯಾಗುವವರೆಗೆ ಅಂಥ ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರ್ ನ ಬಳಕೆಯನ್ನು ನಿಲ್ಲಿಸುವಂತೆಯೂ ಆದೇಶಿಸಬಹುದು.

   ಲಿಫ್ಟ್ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೆಯರನ್ನು ಬಳಸುವುದನ್ನು ನಿಲ್ಲಿಸುವಂತೆ ಪ್ರಾಧಿಕೃತ ಅಧಿಕಾರಿ ಅಥವಾ ಲಿಫ್ಟ್ ಗಳ ಅಥವಾ ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೇಯರ್ನನ ತಪಾಸಣಾಧಿಕಾರಿಯು ಮಾಡಿದ ಯಾವುದೇ ಆದೇಶವನ್ನು ಮೇಲ್ಮನವಿ ಪ್ರಾಧಿಕಾರವು ಅಂಥ ಆದೇಶವನ್ನು ವಿಪರ್ಯಾಯಗೊಳಿಸದೆ ಹೊರತು ಅದನ್ನು ಪಾಲಿಸತಕ್ಕದ್ದು.

×
ABOUT DULT ORGANISATIONAL STRUCTURE PROJECTS